Sunday 21 October 2012

ನಲಿಪು ಬಾಲೆ ನಲಿಪು...!


ದು ನವರಾತ್ರಿಯ ಸಮಯ ಎಲ್ಲಿ ನೋಡಿದರಲ್ಲಿ ವೇಷಧಾರಿಗಳ ಮಾನೆðಮಿ ಕುಣಿತ. ಹುಲಿ ಕರಡಿ ಸಿಂಹಗಳು ಮನೆಗೆ ಹಾಜರಾಗುವ ವೇಳೆ. ಮಕ್ಕಳಿಗೆ ಭಯ ಮಿಶ್ರಿತ ಕಾತುರತೆಯ ಭಾವ. ಡೋಲು ನಗಾರಿಗಳ ಸದ್ದು ಕೇಳಿದರೆ ಸಾಕು ಅಮ್ಮಾ ಹುಲಿ ಬಂತು ಹುಲಿ ಎಂದು ಮಕ್ಕಳೂ ಡಂಕಣಕ ನಲಿವ ಪರಿ ಕಣ್ಣಿಗೆ ಇಂಪು. ಆಹ್ ಇದು ನವರಾತ್ರಿಯ ವೈಭವ.

ಇದು ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಚರಿಸಿವ ನವರಾತ್ರಿಯ ಮೆರುಗಿನ ಮೆಲುಕುಗಳು. ದಿನಾ ಮನೆಗೆ ಬರುತ್ತಿದ್ದ ಕೊರಗಪ್ಪಣ್ಣ ನವರಾತ್ರಿಯ ವೇಳೆ ಹುಲಿ ವೇಷಧರಿಸಿ ಮನೆಗೆ ಬಂದು ಕುಣಿತದ ಜಲಕ್ ತೋರಿಸಿ ಗತ್ತು ಗೈರತ್ತು ಮರೆವ ಅಪೂರ್ವಗಳಿಗೆ. ಮಕ್ಕಳೂ ಅವರೊಂದಿಗೆ ಸೇರಿ ನಾಲ್ಕು ಹೆಜ್ಜೆ ಹಾಕಿ ಮನೆ ಮಂದಿಯರನ್ನೆಲ್ಲಾ ಫಿದಾಗೊಳಿಸುವ ಅದ್ಬುತ ಕ್ಷಣ.
ಹೌದು ನವರಾತ್ರಿ-ದಸರಾ ನಾಡಹಬ್ಬ. ಕರಾವಳಿ ಜಿಲ್ಲೆಯಲ್ಲಿ ಈ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ವಿಶಿಷ್ಟ ರೀತಿಯ ವೇಷಧರಿಸಿ ಹುಲಿ, ಕರಡಿಗಳನ್ನು ಬಿಂಬಿಸುವ ರೀತಿಯಲ್ಲಿ ಮುಖಗಳಿಗೆ ಬಣ್ಣ ಬಳಿದು ದೋಲು ನಗಾರಿಗಳೊಂದಿಗೆ ಪೇಟಯೆಲ್ಲಾ ತಿರುಗಿ ಹುಲಿ, ಕರಡಿ ಸಿಂಹದಂತೆ ತುಸು ಗಾಂಭೀರ್ಯದ ಮೋಜಿನ ಕುಣಿತ ಎಲ್ಲರಲ್ಲೂ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ. ಅದರಲ್ಲೂ ಡಿಫರೆಂಟ್ ವೆರೈಟಿಯ ವೇಶಗಳು ಕಣ್ತನಿಸುತ್ತದೆ. ಈಗೀಗ ನಲಿಪುಬಾಲೆಗಳೂ ಈ ಕುಣಿತದಲ್ಲಿ ಭಾಗವಹಿಸಿ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ. ಶಾಲೆಗೆ ದಸರಾ ರಜೆ ಇರುವುದರಿಂದ ಮರಿ ಸೈನ್ಯದ ಕುಣಿತ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

ಈ ವೇಷಗಳು ತಲೆಮಾರುಗಳಿಂದ ಪದ್ಧತಿಯಾಗಿ ಅಚರಿಸಲಾಗುತ್ತಿದೆ. ಇದರ ಹಿಂದೆ ಒಂದು ಧಾಮಿðಕ  ಹಿನ್ನಲೆ ಇದೆ. ರೋಗ ರುಜಿನದಿಂದ ಬಳಲುವವರು ಕಾಯಿಲೆ ವಾಸಿಯಾಗಲೆಂದು ದೇವಿಯಲ್ಲಿ ನವರಾತ್ರಿ ಷ ಧರಿಸುತ್ತೇನೆ ಎಂದು ಹರೆಕೆ ಹೊತ್ತುಕೊಳ್ಳುತ್ತಾರೆ. ಹೀಗೆ ವೇಷಧರಿಸುವ ಭಕ್ತರು ಪ್ರತೀ ಮನೆಯಂಗಡಿಗಳಿಗೂ ಬೇಟಿ ನೀಡಿ ನತಿðಸಿ ತಮ್ಮ ಹರಕೆ ಪೂತಿðಗೊಳಿಸುತ್ತಾರೆ. ಕೊಟ್ಟ ಕಾಣಿಕೆಯನ್ನು ತೆಗೆದು ಕೊಳ್ಳುತ್ತಾರೆ. ತಮ್ಮ ದಿನದ ಮಾಮೂಲು ಖಚಿð (ಊಟ, ತಿಂಡಿಗೆ) ಬಳಸಿ ಮಿಕ್ಕಿದ್ದನ್ನು ದೇವರ ಹುಂಡಿಗೆ ಹಾಕುತ್ತಾರೆ. ಇದಲ್ಲದೆ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಹರಕೆ ಹೊತ್ತು ಹೋದವರು ಹಣಕ್ಕಾಗಿ ಪೀಡಿಸಬಾರದಂತೆ. ದೇವರ ಕೃಪೆಗೆ ಪಾತ್ರರಾಗಲು ಬಯಸುವವರಿಗೆ ಇದೊಂದು ಸೇವೆ.
ಪೌರಾಣಿಕ ಹಿನ್ನಲೆಯ ಈ ವೇಷಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿದೆ. ವ್ಯಾಪಾರಿಕರಣವಾಗಿ ಬದಲಾಗಿದೆ. ಮಾರುಕಟ್ಟೆ ಇಲ್ಲಿಗೂ ಕಾಲಿಟ್ಟಿದೆ.. ಟೆಂಪೂ, ಜೀಪ್ ಹಾಗೂ ಇನ್ನಿತರ ವಾಹನಗಳನ್ನು ಬಾಡಿಗೆ ಪಡೆದು ತಂಡೋಪ ತಂಡವಾಗಿ ಹಣಗಳಿಸುವ ಆಸೆ ಹೊಂದಿ ಕಾಟಾಚಾರಕ್ಕೆ ವೇಷಧರಿ ಹಣವಸೂಲಿ ಮಾಡುವವರು ಹಲವರಿದ್ದಾರೆ. ಹಬ್ಬದ ಹರೆಕೆಯ ಹೆಸರಿನಲ್ಲಿ ಸುಖಾಸುಮ್ಮನೆ ಬಣ್ಣಬಳಿದು ಎಣ್ಣೆ ಪೂಸಿಕೊಂಡು ಹಣ ಸಂಪಾದಿಸುವುದು ಚಾಳಿಯಾಗಿದೆ. ಇಂತಹವರ ಸಂಖ್ಯೆ ಈಗ ಹೆಚ್ಚುತ್ತಿದೆ.
ನವರಾತ್ರಿಯ ಸಂದರ್ಭದಲ್ಲಿ ಮಾನೆðಮಿ  ವೇಷ ಕಾಣದಿದ್ದರೆ ಅದೇನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಧಾಮಿðಕ ನೆಲೆಯಲ್ಲಿ ಭಕ್ತಿಯಿಂದ ದೇವರ ಸೇವೆಯೆಂದು ತಿಳಿದು ಫಲಾಪೇಕ್ಷೆ ಇಲ್ಲದೆ ಜನರಿಗೆ ಮನೋರಂಜನೆ ಜೊತೆ ಸಂಪ್ರದಾಯವನ್ನು ಪಾಲಿಸಿಕೊಂಡು ಪೌರಾಣಿಕ ಹಿನ್ನಲೆಯನ್ನು ಉಳಿಸಿಕೊಂಡು ಬರುತ್ತಿರುವ ವೇಷಧಾರಿಗಳಿಗೆ ಸಲಾಮ್ ಮಾಡಲೇ ಬೇಕು.
  • ಚಂದ್ರಶೇಖರ್ ಎಸ್ ಅಂತರ

2 comments:

suprb....keep it up........gud luck.....

suprb.....keep it up.....gud luck.....

Post a Comment

Share The Posts

Twitter Delicious Facebook Digg Stumbleupon Favorites More