Wednesday 24 October 2012

ಆರಕ್ಷಕರಿಗಿಲ್ಲ ರಕ್ಷಣೆ



ಬೆಳ್ತಂಗಡಿ/ಪುಂಜಾಲಕಟ್ಟೆ: ಬಿರುಕು ಬಿಟ್ಟ ಗೋಡೆಗಳು, ಸೋರುವ ಹಂಚುಗಳು, ಬೀಳಲು ಮಿನಾಮೇಷ ಎಣಿಸುತ್ತಿರುವ ಕಟ್ಟಡದ ಕೆಲ ಭಾಗಗಳು, ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದೆ ಪರದಾಡುವ ದೃಶ್ಯಗಳು, ಹಾಗಾಗಿ ನೂತನ ಕಟ್ಟಡ ನಿ«Äðಸಿದರೂ ಇನ್ನೂ ಸ್ಥಲಾಂತರಗೊಳ್ಳದ ಪೊಲೀಸ್ ಪೇದೆಗಳ ದೌಭಾðಗ್ಯಗಳು ಇತ್ಯಾದಿ ಇತ್ಯಾದಿಗಳು. ಇದು ಸಮಾಜದ ಸುವ್ಯವಸ್ಥೆ ಕಾಪಾಡುವ ಪೊಲೀಸರ ಪುಂಜಾಲಕಟ್ಟೆ ಉಪ ಠಾಣೆಯ ದುವ್ಯðವಸ್ಥೆಗಳು.
ಹಂಚಿನ ಕಟ್ಟಡ ಇರುವ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಅವ್ಯವಸ್ಥೆಗಳು ಹಲವಾರು. ಸಾರ್ವಜನಿಕರು ಪೊಲಿಸರಿಗೆ ದೂರು ನಿಡಲು ಹೋದಾಗ ಜನಜಂಗುಳಿ ಇದ್ದರೆ  ಸ್ಥಳದ ಅಭಾವದಿಂದಾಗಿ ಕುಳಿತುಕೊಳ್ಳು ಪಕ್ಕದಲ್ಲಿರುವ ಪೊಲೀಸ್ ಜೀಪ ಶೆಡ್ ಆಶ್ರಯಿಸಿಕೊಳ್ಳ ಬೇಕಾದ ದುರಂತ  ಪರಿಸ್ಥತಿ ಒದಗಿದೆ.
ಇದರ ಕುರಿತಾಗಿ ಉನ್ನತ ಅಧಿಕಾರಿಗಳಿಗೆ ತಿಳಿ ಹೇಳಿ ವಿಸ್ತೃತ ನೂತನ ಕಟ್ಟಡ ನಿªÀiÁðಣಗೊಂಡಿದೆಯಾದರೂ ಸ್ಥಳಾಂತರಗೊಳ್ಳಲು ಮುಹೂರ್ಥ ಮಾತ್ರ ಇನ್ನೂ ಒದಗಿ ಬಂದಿಲ್ಲ. ಕಳೆದ ವರ್ಷವೇ ಕಟ್ಟಡ ನಿªÀiÁðಣ ಕಾಮಗಾರಿ ಪ್ರರಂಭಸಲಾಗಿತ್ತು. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿªÀiÁðಣವಾಗಿ ಎರಡು ತಿಂಗಳುಗಳೇ ಕಳೆದಿದೆ. ಆದರೆ ಇನ್ನೂ ಅಸ್ತಿಪಂಜರದಂತಿರುವ ಅದೇ ಹಳೇ ಸೋರುವ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ದು«ðಧಿ ಪೊಲೀಸರದು.
ನೂತನ ಕಟ್ಟಡ ನಿ«Äðಸಲು ಅನುಮತಿ ನೀಡಿಡ ಉನ್ನತ ಪೊಲೀಸ್ ಅಧಿಕಾರಿಗಳು, ಕೈ ಜೋಡಿಸಿದ ರಾಜಕಾರಣಿಗಳು ಕಟ್ಟಡ ನಿªÀiÁðಣವಾಗಿ ಎರಡು ತಿಂಗಳು ಕಳೆದರೂ ಸ್ಥಳಾಂತರಗೊಳಿಸಲು ಅನುಮತಿ ನೀಡದ ಕಾರಣ ಪುಂಜಾಲಕಟ್ಟೆ ಠಾಣೆಯ ಪೊಲೀಸರಿಗೆ ಅಂಗೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಪರಿಸ್ಥತಿ.
ಹಳೆ ಕಟ್ಟಡದ ದರಾವಸ್ಥೆ ಕಂಡ ಸಾರ್ವಜನಿಕರು ಹೊಸ ಕಟ್ಟಡಕ್ಕೆ ಪ್ರವೇಶ ಯಾವಾಗವೆಂದು ಪೊಲೀಸರಲ್ಲಿ ಪ್ರಶ್ನಿಸಿದರೆ ಕೆಲ ರಾಜಕೀಯ ವ್ಯಕ್ತಿಗಳು ಹಿರಿಯ ಅಧಿಕಾರಿಗಳು ಬರಬೇಕು ಉದ್ಘಾಟಿಸಬೇಕು ಎಂದು ಪೆಚ್ಚು ಮೋರೆಯಲ್ಲಿ ಪೊಲೀಸರು ತಿಳಿಸುತ್ತಾರೆ.
ಮಳೆಗಾಲ ಪ್ರಾರಂಭವಾಗಿ ಹಲವಾರು ದಿನಗಳೇ ಕಳೆದಿವೆ. ಸೋರುತ್ತಿರುವ ಕಟ್ಟಡದಿಂದಾಗಿ ಅಲ್ಲಿರುವ ಕಡತಗಳು ಉಪಕರಣಗಳು ಮಳೆಗೆ ಒದ್ದೆಯಾಗಿ ನಾಶವಾಗುವ ಸಂಭವವೂ ಇದೆ. ರಕ್ಷಣೆ ನೀಡುವ ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ.
ಹಲವಾರು ವರ್ಷದ ಬಳಿಕ ಸುಸಜ್ಜಿತ ಪೊಲೀಸ್ ಠಾಣೆಯೊಂದು ಪುಂಜಾಲಕಟ್ಟೆಯಲ್ಲಿ ನಿªÀiÁðಣವಾಗಿದೆಯಾದರೂ ಅಲ್ಲಿಗೂ ಹೋಗಲಾರದೆ ಇಲ್ಲಿಯೂ ಇರಲಾಗದೆ ಪೊಲೀಸರು ತ್ರಿಶಂಕು ಸ್ಥಿತಿ ತಲುಪಿದ್ದಾರೆ.  ನೂತನ ಕಟ್ಟಡದಲ್ಲಿ ಯಥೇಚ್ಛ ಸ್ಥಳ ಉತ್ತಮ ವ್ಯವಸ್ಥೆ, ಕಾಂಕ್ರೀಟು ಕಟ್ಟಡ ಹೊಂದಿದೆ. ಎಲ್ಲವೂ ಇದ್ದು ಏನೂ ಇಲ್ಲದಂತಹ ಪರಿಸ್ಥತಿ ಪೊಲೀಸರದ್ದಾಗಿದೆ.
ನೂತನ ಕಟ್ಟಡ ಕಟ್ಟಲು ಹಲವಾರು ವರ್ಷಗಳ ಬಳಿಕ ಹಸಿರು ನಿಶಾನೆ ನೀಡಿದ್ದ ಉನ್ನತ ಅಧಿಕಾರಿಗಳು, ಜೊತೆಗೂಡಿದ್ದ ಜನಪ್ರತಿನಿಧಿಗಳು ಸುಖಾಸುಮ್ಮನೆ ಉದ್ಘಾಟಣೆ ಮಾಡಲು ಬಾರದೆ ಕಾಲಹರಣ ಮಾಡುತ್ತಿರುವುದು ಉದಾಸಿನಕ್ಕೆ ಜಲಂತ ನಿದರ್ಶನ ನೂತನ ನಿ«Äðತ ಕಟ್ಟಡವಿದ್ದರೂ ಅಜೀuÁð ವಸ್ಥೆಯಲ್ಲಿರುವ ಕಟ್ಟಡದಲ್ಲೇ ಕೆಲಸ ನಿರ್ವಹಿಸಬೇಕಾದ ¥ÉÆಲೀಸರ ದುಸ್ಥಿತಿಯನ್ನು ಕಂಡೂ ಕಾಣದಂತೆ ಕುಳಿತಿರುವ ಪೊಲೀಸ್ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ಅತಿ ಶೀರ್ಘದಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ¥ÉÆಲೀಸರಿಗೆ ಸುಗಮವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿದೆ.
  • ಚಂದ್ರಶೇಖರ ಎಸ್ ಅಂತರ

3 comments:

he he he Really their Bad Luck

ಇದು ತುಂಬಾ ಕಡೆ ಉದೆ ಸರ್ ಆದರೆ ಗುರುತಿಸಬೇಕು

Post a Comment

Share The Posts

Twitter Delicious Facebook Digg Stumbleupon Favorites More