Monday 29 October 2012

ಬದುಕು ಪೊರೆಯುವ ಪೊರಕೆ


ಅದು ಹತ್ತು ವರ್ಷದ ಹಿಂದಿನ ದೃಶ್ಯ. ಮನೆಯಲ್ಲಿ ಅಜ್ಜಿ ವೀಳ್ಯದೆಲೆ ಬಾಯಿಗೆ ಹಾಕಿ ಗೋಡೆಗೆ ಒರಗಿ ತೆಂಗಿನ ಗರಿಗಳಿಂದ ಹಿಡಿಸೂಡಿ ತಯಾರಿಸಲು ಕೂತರೆ ಮಕ್ಕಳ ಹಿಂಡು ಅಲ್ಲಿಗೆ ಹಾಜರು. ಅಜ್ಜಿ ಕಥೆ ಹೇಳುವುದನ್ನು ಪ್ರಾರಂಭಿಸುತ್ತಿದ್ದರು. ಮಕ್ಕಳು ಕಥೆ ಆಲಿಸುತ್ತಾ ಪೊರಕೆ ತಯಾರಿಸಿವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ ಈಗ ಚಿತ್ರಣವೇ ಬದಲಾಗಿದೆ. ನೈಸಗಿðವಾದ ಪೊರಕೆ ತಯಾರಿಸುವವರ ಸಂಖ್ಯೆ ಕ್ಷೀನಿಸಿದೆ. ಅದನ್ನು ಉಪಯೋಗಿಸುವವರ ಸಂಖ್ಯೆಯೂ ವಿರಳವಾಗಿದೆ. ತೆಂಗಿನ ಗರಿಗಳಿಂದ ತಯಾರಿಸುವ ಗಟ್ಟಿಯಾದ ಪೊರಕೆ ಯಾರಿಗೂ ಬೇಡವಾಗಿದೆ.
ಪಟ್ಟಣದ ಮಕ್ಕಳಿಗಂತೂ ತೆಂಗಿನ ಗರಿಗಳ ಪೊರಕೆ ಎಂದರೆ ಏನೆಂದೇ ಗೊತ್ತಿಲ್ಲ. ಅವರಿಗೆ ಏನಿದ್ದರೂ ವ್ಯಾಕುಮ್ ಕ್ಲೀನರ್ ಪ್ಲಾಸ್ಟಿಕ್ ಪೊರಕೆ, ಹಾಗೂ ಇನ್ನಿತರ ಗುಡಿಸುವ ಯಂತ್ರಗಳ ಕುರಿತು ಅರಿವು ಜಾಸ್ತಿ. ತೆಂಗಿನ ಗರಿಗಳ ಪೊರಕೆ ಕೇವಲ ಹಳ್ಳಿಗಳಲ್ಲಿ ಬಳಕೆಯಾಗುತ್ತಿದೆ, ಅದೂ ಕೆಲ ಅಜ್ಜಿಯಂದಿರಿರುವ ಮನೆಯಲ್ಲಿ ಮಾತ್ರ. ಇನ್ನುಳಿದಲ್ಲಿ ಗುಡಿಸುವ ಯಂತ್ರಗಳು ಪ್ಲಾಸ್ಟಿಕ್ ಪೊರೆಕ ಸ್ಥಾನ ಗಿಟ್ಟಿಸಿವೆ.
ಜನರು ಶ್ರಮ ರಹಿತ ಜೀವನ ನಡೆಸಲು ಮಾರುಕಟ್ಟೆಯಿಂದ ಸಿದ್ಧ ಪೊರಕೆ ತರುತ್ತಾರೆ, ಗುಡಿಸುವ ಯಂತ್ರಗಳನ್ನು ಬಳಸುತ್ತಾರೆ. ಒಂದೊಮ್ಮೆ ಗುಡಿಕೈಗಾರಿಕೆಯಲ್ಲಿ ಒಂದಾಗಿದ್ದ ಪೊರಕೆ ತಯಾರಿಕೆ ಈಗ ನಶಿಸಿಹೋಗುತ್ತಿದೆ. ಪೊರಕೆ ತಾರಿಸುವ ಕಲೆ ನೈಪುಣ್ಯತೆ ಈಗಿನ ಪೀಳಿಗೆಗೆ ತಿಳಿದಿಲ್ಲ. ಮನೆಗೆ ಪಟ್ಟಣದಲ್ಲಿರುವ ಮೊಮ್ಮಕ್ಕಳು ಬಂದರೆ ಇದೇನು ಕಡ್ಡಿಗಳನ್ನು ಒಂದೆಡೆ ಜೋಡಿಸಿ ಕಟ್ಟಿಟ್ಟಿದ್ದೀರ ಎಂದು ಪ್ರೆಶ್ನಿಸುತ್ತಾರೆ ಎನ್ನುತ್ತಾರೆ ಮಡಂತ್ಯಾರು ಸಮೀಪದ ಮಾಲಾಡಿಯ ಸುಲೋಚನ. ಅವರು ತಮ್ಮ ಮನೆಗೆ ಬೆಕಾಗುವಷ್ಟು ಪೊರಕೆಯನ್ನು ಅವರೇ ತಯಾರಿಸುತ್ತಾರೆ.
ಹಿಡಿಸೂಡಿಯನ್ನು ತೆಂಗಿನ ಹಸಿ ಹಾಗೂ ಒಣ ಗರಿಗಳಿಂದ ತಯಾರಿಸಬಹುದು. ಅಡಿಕೆ ಸೋಗೆಯಿಂದಲೂ ತಯಾರಿಸಲಾಗುತ್ತದೆ ಜೋಳದ ದಂಟುವಿನಿಂದಲ್ಲೂ ಕೆಲವರು ತಯಾರಿಸುತ್ತಾರೆ. ಪೊರಕೆಯಲ್ಲೂ ವಿವಿಧತೆ ಇದೆ. ದನದ ಹಟ್ಟಿಗೆ ತರೆಗೆಲೆ ತರಲು ಹೋಗುವಾಗ ಕೊಂಡು ಹೋಗುವ ಪೊರಕೆ ಬೇರೆ. ಮನೆ ಗುಡಿಸಲು ಉದ್ದವಾದ ಪೊರಕೆ, ಅಂಗಣ ಗುಡಿಸಲು ಗಿಡ್ಡ ಕಡ್ಡಿಗಳ ಪೊರಕೆ [ಮನೆಯೊಳಗೆ ಬಳಸಲಾದ ಹಳೆ ಪೊರಕೆ] ಹೆಚ್ಚಾಗಿ ಬಳಸುತ್ತಾರೆ ಎಂದು ಸುಲೋಚನ ತಿಳಿಸುತ್ತಾರೆ.
ತೆಂಗಿನ ಗರಿ ಪೊರಕೆಗೆ ಮಾತ್ರವಲ್ಲದೆ ಬೆಂಕಿ ಹೊತ್ತಿಸಲು, ಚಪ್ಪರ ನಿಮಿðಸಲು, ಬುಟ್ಟಿ ತಯಾರಿಸಲು ಹಾಗೂ ಮುಳಿ ಹುಲ್ಲಿನ ಮನೆ ನಿಮಿðಸುವಾಗ ಹೊದಿಕೆಯಾಗಿ ಉಪಯೋಗಿಸಲಾಗುತ್ತಿತ್ತು.  ಎಂದು ಸುಲೋಚನ ತಿಳಿಸುತ್ತಾರೆ. ಕೇದಿಗೆ ಒಲಿಯ ಚಾಪೆಯನ್ನು ಹಿಂದೆ ಬಳಸಲಾಗುತ್ತಿತ್ತು. ಆದರೀಗ ಅದು ಮಾಯವಾಗಿದೆ. ತೆಂಗಿನ ಗರಿಗಳು ಇನ್ನೂ ಅನೇಕ ಸಣ್ಣ ಪುಟ್ಟ ವಸ್ತುಗಳನ್ನು ನಿಮಿðಸಲು ಸಹಕಾರಿಯಾಗಿದೆ ಎಂದು ಅವರು ಹೇಳುತ್ತಾರೆ. ಪೊರಕೆ  ನಿಮಾðಣ ಎಲ್ಲರ ಮನೆಯಲ್ಲೂ ನಡೆಯುತ್ತಿದ್ದ ಒಂದು ಕಾಯಕ. ಆದರೀಗ ಕಣ್ಮರೆಯಾಗುತ್ತಿರುವ ಗುಡಿ ಕೈಗಾರಿಕೆಯಲ್ಲಿ ಇದು ಒಂದು. ಪೊರಕೆ ನಿಮಾðಣ ಸುಲಭವಾದರೂ ಯಾರೂ ಅದರತ್ತ ಗಮನ ಹರಿಸದಿರುವುದು ಮಾತ್ರ ವಿಷಾದನೀಯ.
  • ಚಂದ್ರಶೇಖರ್ ಎಸ್ ಅಂತರ

1 comments:

Great Baduku Heegu sgisuttare... Great women

Post a Comment

Share The Posts

Twitter Delicious Facebook Digg Stumbleupon Favorites More