Wednesday 24 October 2012

ನವರಸ ಭಾವ ತುಂಬಿದ ಭರತನಾಟ್ಯ


ಬೆಳ್ತಂಗಡಿ : ಅದು ಭರತನಾಟ್ಯದ ಸೊಗಡನ್ನು ಉಣಬಡಿಸಿದ ನಾಟ್ಯಮಂಜರಿ. ನವರಸಗಳು ಸಂಗಮಗೊಂಡ ವೇದಿಕೆ. ನಾಟ್ಯ ರಸಿಕರ ಮನ ತಣಿಸಿದ ಪರಿಪೂರ್ಣ ಕಲೆ ಬಿಂಬಿಸಿದ ಭರತನಾಟ್ಯ ನೃತ್ಯ ವೈಭವ.
ಉಜಿರೆ ಶ್ರೀ ಧ.ಮ ಕಾಲೇಜಿನಲ್ಲಿ ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಯುವ ಸೌರಭ ಪ್ರಾಯೋಜಕತ್ವದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯವರ ಸಹಯೋಗದೊಂದಿಗೆ ನಡೆದ ಭರತನಾಟ್ಯ ನೃತ್ಯ ವೈಭವ ಕಾರ್ಯಕ್ರಮದ ಸಂದರ ಕ್ಷಣಗಳ ಮೆಲುಕುಗಳು.
ಕಾಲೇಜಿನ ದ್ವಿತೀಯ ಬಿ.ಕಾಂ ಪದವಿ ವಿದ್ಯಾನಿ, ಬೆಳ್ತಂಗಡಿ ಕಲಾನಿಕೇತನ ನೃತ್ಯ ಸಂಸ್ಥೆಯ ವಿದುಷಿ ವಿದ್ಯಾ ಮನೋಜ್ ರ ಶಿಷ್ಯೆ, ರಾಜಶ್ರೀ ತನ್ನ ನೃತ್ಯದ ಮೂಲಕ ನೃತ್ಯ ಪ್ರೇಮಿಗಳ ಮನಸ್ಸನ್ನು ಸೂರೆಗೈದ ನಾಟ್ಯ ಮಯೂರಿ. ನವರಸಗಳ ನವ ಭಾವವನ್ನು ನಯವಾಗಿ ಮೆಲ್ಲಿಸಿದ ನಾಟ್ಯವಿಶಾರದೆ.
ಕಿಕ್ಕಿರಿದು ತುಂಬಿದ್ದ ಸಮ್ಯಕ್ ದರ್ಶನ ಸಭಾವನದಲ್ಲಿ ತನ್ನ ನಾಟ್ಯ ದರ್ಶನದಿಂದ ವೀಕ್ಷಕರ ಚಿತ್ತ ಸೆಳೆದು ನಾಟ್ಯದ ವಿವಿಧ ಆಯಾಮಗಳನ್ನು ಸುಂದರವಾಗಿ ಪ್ರದ²ðಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದಳು.
ರಾಜಶ್ರೀಗೆ ಹಾಡುಗಾರಿಕೆಯಲ್ಲಿ ಪಾಣೆಮಂಗಳೂರಿನ ಕೃಷ್ಣಾಚಾರ್, ಮೃದಂಗದಲ್ಲಿ ಗೀತೇಶ್ ನೀಲೇಶ್ವರ್, ವಯಲಿನ್ನಲ್ಲಿ ಕಾಸರಗೋಡಿನ ಬಾಲಾರಾಜ್ ಸಹಕರಿಸಿದರು.
ಇಂದ್ರ ಲೋಕದ ಲಲನೆಯರನ್ನು ನಾಚಿಸುವಂತೆ ನಯನಮನೋಹರವಾಗಿ ನಸಿದ ರಾಜಶ್ರೀ ಕಾಲೇಜಿನ ಸಭಾಭವನವನ್ನು ಸ್ವರ್ಗ ಸೃಜಿಸಿದರು. ಅವರ ನೃತ್ಯ ಸೊಂಪು ಸಭಿಕರಲ್ಲಿ ನಾಟ್ಯದ ಅಲೆ ನಿ«Äðಸಿತು. ಕಣ್ಣರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಾಟ್ಯ ಕಾರ್ಯಕ್ರಮ ಮುಗಿದಂತೆ ಭಾಸವಾಯಿತು. ಸಭಾಭವನದ ನಾಟ್ಯವನ್ನು ಆಸ್ವಾದಿಸಿ ಹೊರಬಂದ ಪ್ರೇಕ್ಷಕರ ಮೊಗದಲ್ಲಿ ಬ್ರಹ್ಮಾನಂದ.
ರಾಜಶ್ರೀಯ ನವಿಲ ನರ್ತನ ಕಾಲೇಜಿನಲ್ಲಿ ಸುಮಧುರ ತಂಪನೆಯ ತಂಗಾಳಿಯನ್ನು ಬೀಸಿತ್ತು. ಎಲ್ಲರನ್ನೂ ಸೋಜಿಗಗೊಳಿಸಿತ್ತು. ಕಾಲೇಜಿನಲ್ಲಿ ನಡೆದ ಈ ನಾಟ್ಯ ಕಲಾ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಧನ್ಯತಾ ಭಾವ ಮೂಡಿಸಿತ್ತು. ಇಂತಹ ಉತ್ತಮ ಕಾರ್ಯಕ್ರಮ ನಿರೂಪಿಸಿದ್ದಕ್ಕೆ ಪ್ರಶಂಸೆ ದೊರೆಯಿತು.
  • ಚಂದ್ರಶೇಖರ್ ಎಸ್ ಅಂತರ

0 comments:

Post a Comment

Share The Posts

Twitter Delicious Facebook Digg Stumbleupon Favorites More