Monday 12 November 2012

ಹೀಗೊಬ್ಬ ಅಪರೂಪದ ಪರಿಸರ ಪ್ರೇಮಿ


 ಶುಚಿತ್ವ ಕಾಪಾಡಿ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳಿ ಎನ್ನುವ ಉಪದೇಶ ಭಾಷಣ, ಸಮಾವೇಶ, ಆಂದೋಲನಗಳಲ್ಲಿ ಯಥೇಚ್ಛವಾಗಿ ಕೇಳ ಸಿಗುತ್ತದೆ. ಸ್ವಚ್ಛತೆ ಕುರಿತಾಗಿ ಒಂದೆರಡು ದಿನ ಸಮಾವೇಶ, ಜಾಥಗಳನ್ನ ಕೈಗೊಂಡು ಮಾದ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡು ಎಂದು ಬಳಿಕ ಸುಮ್ಮನಾಗುವವರು ಪ್ರತಙೀ ಊರಿನಲ್ಲೂ ಸಿಗುತ್ತಾರೆ.ಇಂತಹ ಪರಿಸರ ಪ್ರೇಮಿಗಳ ಪರಿಸರ ಕಾಳಜಿ ಏನಿದ್ದರೂ ಜುಲೈ ತಿಂಗಳ ವನಮಹೋತ್ಸವ ಅಕ್ಟೋಬರರ ತಿಂಗಳ ವನ್ಯ ಜೀವಿಗಳ ಸಪ್ತಾಹಗಳ ಅವಧಿಗೆ ಮಾತ್ರ ಸೀಮಿತ.
ಈ ನಡುವೆಯೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಮೈಗೂಡಿಸಿಕೊಂಡು ಅದನ್ನು ಕಾಯಾ ವಾಚಾ ಮನಸಾ ಪಾಲಿಸುವವರು ಅಲ್ಲೊಬ್ಬರು ಇಲ್ಲೊಬ್ಬರು ಕಾಣ ಸಿಗುತ್ತಾರೆ. ಮಚ್ಚಿನ ಗ್ರಾಮದ ದೇವರಾಜ್ ದೇವಾಡಿಗ ಇಂತಹ ಅಪರೂಪದ ವ್ಯಕ್ತಿಗಳಲ್ಲಬ್ಬರು. ಯಾವುದೇ ಸ್ವಾರ್ಥ ಇಲ್ಲದೆ ಪ್ರತಿ ದಿನೆ ಪರಿಸರ ಸ್ವಚ್ಛತೆಗಾಗಿ ಶ್ರಮಿಸುತ್ತಾ ಬಂದಿರುವ ದೇವರಾಜ್ ತಮ್ಮ ಊರು, ಕೇರಿ ಹಾಗೂ ಗ್ರಾಮದ ಸ್ವಚ್ಛತೆಗಾಗಿ ಸದಾ ಶ್ರಮ ದಾನ ಮಾಡುತ್ತಾ ಗಮನ ಸೆಳೆದಿದ್ದಾರೆ. ಪರಿಸರವನ್ನು ಸವಚ್ಛವಾಗಿಡಲು ತಮ್ಮಿಂದಾದ ಕೈಂಕರ್ಯಗಳನ್ನು ಅವರು ನರಂತರವಾಗಿ ಮಾಡುತ್ತಾ ಬಂದಿದ್ದಾರೆ.
ದೇವರಾಜ್ ದೇವಾಡಿಗರಿಗೆ ನಲವತ್ತಾರು ವರ್ಷ. ವೃತ್ತಿಯಲ್ಲಿ ಕೂಲಿ ಕಾಮರ್ಿಕ. ಪ್ರವೃತ್ತಿಯಲ್ಲಿ ಪ್ರಕೃತಿಯ ಆರಾಧಕ. ಅದರ ಅಂದಕ್ಕೆ ಚ್ಯುತಿ ಉಂಟುಮಾಡುವ ಕಸ ಕಡ್ಡಿ, ಬಾಟಲಿ, ಪ್ಲಾಸ್ಟಿಕ್, ತೆರೆಗೆಲೆ, ಕಳೆ, ಮುಳ್ಳುಗಳು ಇತ್ಯಾದಿ ಅನೇಕ ಸಣ್ಣ ಪುಟ್ಟ ತ್ಯಾಜ್ಯಗಳನ್ನು ಹೆಕ್ಕಿ ಪರಿಸರ ಶುಚಿಗೊಳಿಸುವ ಕಾಯಕವನ್ನು ಅವರು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುವಾಗ, ಆರಂಭದಲ್ಲಿ ಜನ ಹೀಯಾಳಿಸುತ್ತಿದ್ದುದೂ ಉಂಟು. ಆದರೆ ಅದಕ್ಕೆಲ್ಲ ಸೊಪ್ಪು ಹಾಕದೆ ತಮ್ಮ ಸೇವೆಯನ್ನು ಮುಂದುವರಿಸುತ್ತಾ ಬಂದಿದ್ದಾರೆ. ಕ್ರಮೇಣ ಜನರೂ ಕೂಡ ಇವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು ಇವರ ಸೇವೆ ಬಗ್ಗೆ ಹೆಮ್ಮೆ ಪಡುತ್ತಾರೆ.
ಕೇವಲ ಪ್ರಕೃತಿ ಶುಚಿತ್ವ ಮಾತ್ರವಲ್ಲದೆ ಮಳೆಗಾಲದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಸರಿಪಡಿಸುವುದು, ಸಾರ್ವಜನಿಕ ಶೌಚಾಲಯವನ್ನು ಶುಚಿಗೊಳಿಸುವುದು, ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಪ್ರಾಣಿಗಳ ವಿಲೇವಾರಿ ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯ ಇವರು ಶ್ರದ್ಧೆಯಿಂದ ಮಾಡುತ್ತಿದ್ದಾರೆ.
'ಶುಚಿತ್ವದ ಕುರಿತಾದ ಚಿಂತನೆ ನನ್ನದು. ಗಾಂಧೀಜಿಯ ಅಹಿಂಸಾ ತತ್ವ ಪಾಲಾಕ ನಾನು. ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂದು ನಂಬಿದವ. ಹಾಗಾಗಿ ನಿರ್ಮಲ ಗ್ರಾಮ ರೂಪಿಸುವಲ್ಲಿ ನನ್ನ ಕಿರು ಸೇವೆ. ಪ್ರತೀ ದಿನ ಗ್ರಾಮದ ಬಸ್ಸು ನಿಲ್ದಾಣ ಸ್ವಚ್ಛಗೊಳಿಸುತ್ತೇನೆ. ಪ್ರತಿ ಭಾನುವಾರ ಪೂರ್ತಿ  ಗ್ರಾಮವನ್ನು ತಿರುಗುತ್ತೇನೆ ಕಸಕಡ್ಡಿ, ತ್ಯಾಜ್ಯಗಳನ್ನು ಹೆಕ್ಕುತ್ತೇನೆ, ಸಾರ್ವಜನಿಕ ಶೌಚಾಲಯ ಶುಚಿಗೊಳಿಸುತ್ತೇನೆ. ಪ್ರತಿದಿನ ಮನೆಯಿಂದ ಕೆಲಸಕ್ಕೆ ಹೋಗುವಗ ನಡೆವ ದಾರಿಯಲ್ಲಿ ಕಸ ಕಡ್ಡಿ ಕಂಡರೆ ಆರಿಸಿ ಕಸದ ತೊಟ್ಟಿಗೆ ಹಾಕತ್ತೇನ ಎನ್ನುತ್ತಾರೆ ದೇವರಾಜ್.
ಪರಿಸರ, ಶೌಚಾಲಯ ನಿರ್ಮಲವಿಡಲು ಅವರು ತಮ್ಮ ಸ್ವಂತ ದುಡಿಮೆಯ ಸಂಪಾದನೆಯಲ್ಲಿ ವಾರಕ್ಕೆ ಕನಿಷ್ಟ 10ರೂ ವ್ಯಯಿಸುತ್ತಾರೆ. ಪ್ರತೀ ರವಿವಾರ ಅವರದು ಪರಿಸರಕ್ಕಾಗಿ ಶ್ರಮದಾನದ ದಿನ. ಅಪರಾಹ್ನದವರೆಗೆ ಗ್ರಾಮದೊಳಗೆ 6-7 ಕಿ.ಮೀ ತನಕ ಅವರ ನಡಿಗೆ. ಇವರ ಶುಚಿತ್ವದ ಕಾಳಜಿ ಕಂಡ ಮಚ್ಚಿನ ಗ್ರಾ.ಪಂ ಗಾಂಧಿ ಜಯಂತಿಯಂದು ಇವರಿಗೆ ಸನ್ಮಾನಿಸಿತು.
'ಸ್ವಚ್ಛತೆ ಕುರಿತು ವಿದ್ಯಾರ್ಥಿಗಳಿಗೆ  ತಿಳಿಸುತ್ತಿದ್ದೇನೆ. ಜನರಲ್ಲೂ ಸ್ವಚ್ಛತೆಯ ಅರಿವು ಮೂಡಿಡೆ. ಕಸ ಕಡ್ಡಿ, ಪ್ಲಾಸ್ಟಕ್ ತ್ಯಾಜ್ಯಗಳನ್ನು ಅಲ್ಲಲ್ಲಿ ಎಸೆಯುವುದು ಕಡಿಮೆಯಾಗಿದೆ. ಇದು ನನಗೆ ಸಾರ್ಥಕತೆ ತಂದಿದೆ' ಎನ್ನುತ್ತಾರೆ ದೇವರಾಜ್.
ಪ್ರಚಾರ ಗಿಟ್ಟಿಸುವ ಸಲುವಾಗಿ ತೋರಿಕೆಗಾಗಿ ಸಾಕಷ್ಟು ಹಣ ಪೋಲು ಮಾಡಿ ಸ್ವಚ್ಛತಾ ಜಾಗೃತಿ ಆಂದೋಲನದಲ್ಲಿ ಭಾಷಣಗಳನ್ನು ಬೀಗುವ ಜನರಿಗೆ, ಇವರ ನಿಸ್ವಾರ್ಥ ಸೇವೆ ಒಂದು ಪಾಠವಾಗಬೇಕು. ಪಕ್ಷಾತೀತವಾಗಿ ಪ್ರಚಾರ ಗಿಟ್ಟಿಸದೆ ಪರಿಸರ ಸ್ವಚ್ಛಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಇತರರಿಗೆ ಪ್ರೇರಣೆಯಾದರೆ ದಕ್ಷಿಣ ಕನ್ನಡ ಜಿಲ್ಲೆ ನಿಜವಾದ ಅರ್ಥದಲ್ಲಿ 'ಸಂಪೂರ್ಣ ಸ್ವಚ್ಛತಾ ಜಿಲ್ಲೆ' ಆಗುವುದರಲ್ಲಿ ಅನುಮಾನವಿಲ್ಲ. ದೇವರಾಜರ ಸ್ವಚ್ಛತಾ ಅಭಿಯಾನಕ್ಕೆ ನಾವೆಲ್ಲರೂ ಬಿಗುಮಾನ ಮರೆತು ಕೈ ಜೋಡಿಸೋಣವಲ್ಲವೇ.
  • ಚಂದ್ರಶೇಖರ ಎಸ್ ಅಂತರ.  

1 comments:

Post a Comment

Share The Posts

Twitter Delicious Facebook Digg Stumbleupon Favorites More