Tuesday 18 December 2012

ಕ್ರಿಯಾಶೀಲ ವಿಕಸನಕ್ಕೊಂದು ವೇದಿಕೆ


 ಕಾಲೇಜು ಅಂಗಳದಲ್ಲಿ ರಂಗ ತರಬೇತಿ 
 ಕಾಲೇಜು ಕೇವಲ ನಾಲ್ಕು ಗೋಡೆಯ ಉಪನ್ಯಾಸವಲ್ಲ. ಬದಲಾಗಿ ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ವೇದಿಕೆ. ಕಲಿಕೆಯ ಜೊತೆ ವಿಧ್ಯಾರ್ಥಿಗಳ ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಕಲೆಗೆ ತಕ್ಕ ಬೆಲೆ ಸಿಗುತ್ತಿದೆ. ಪಠ್ಯ ಕಲಿಕೆಯ ಜೊತೆ ವಿಧ್ಯಾರ್ಥಿಗಳ ಕ್ರಿಯಾಶೀಲ ಅಭಿವೃದ್ಧಿಗೆ ಪ್ರಾಶಸ್ತ್ಯ ದೊರೆತರೆ ಶಿಕ್ಷಣದ ಉದ್ದೇಶ ಸಾರ್ಥಕ.
ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜುಗಳಲ್ಲೂ ವಿಧ್ಯಾರ್ಥಿಗಳ ಸರ್ವತೋಮುಖ ಅಭಿವರದ್ಧಿಗೆ ಅವಕಾಶ ಕಲ್ಪಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ವಿಧ್ಯಾರ್ಥಿಗಳ ಶಿಕ್ಷಣದ ಜತೆ ವ್ಯಕ್ತಿತ್ವ ವಿಕಸನಕ್ಕೆ ಹೊಸ ರೂಪ ನೀಡುವ ರಂಗ ತರಬೇತಿ ಕೇಂದ್ರಗಳು ಈ ನಿಟ್ಟಿನಲ್ಲಿ ಹೊಸ ಬೆಳವಣಿಗೆ. ಕರಾವಳಿಯ ಒಂಡೆರಡು ಕಾಲೇಜುಗಳು ಮಾತ್ರ ರಂಗ ತರಬೇತಿಗೆ ಮಹತ್ವ ನೀಡುತ್ತಿದ್ದವು. ಆದರೆ ಇತ್ತೀಚಿಗೆ ಕರಾವಳಿಯ ಬಹತೇಕ ಕಾಲೇಜುಗಳಲ್ಲಿ ತಂಗ ಚಟುವಟಿಕೆ ಗರಿಗೆದರುತ್ತಿರುವುದು ಶುಭ ಸಂಕೇತ.
ರಂಗ ಶಿಕ್ಷಣ ವಿಧ್ಯಾರ್ಥಿಗಳ  ಕಲಿಕೆಯ ಜೊತೆಜೊತೆಗೆ ನಡೆಸಲಾಗುತ್ತಿದೆ. ಕಾಲೇಜಿನ ಸಮಯಕ್ಕೆ ಸರಿ ಹೊಂದುವಂತೆ ವಿಧ್ಯಾರ್ಥಿಗಳಿಗೆ  ತಂದರೆಯಾಗದಂತೆ ರಂಗ ಶಿಕ್ಷಣವನ್ನು ನೀಡಲಾಗುತ್ತಿದೆ. ಆಸಕ್ತರು ರಂಗ ತರಬೇತಿ ಪಡೆಯಬಹುದು. ರಂಗ ಶಿಕ್ಷಣ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ. ವೇದಿಕೆ ಏರಲು ನಡುಗುವ ವಿಧ್ಯಾರ್ಥಿಗಳು  ಸಾವಿರಾರು ಪ್ರೇಕ್ಷಕರ ಎದುರು ನಿಂತು ನಿರರ್ಗಳವಾಗಿ ಮಾತನಾಡುವ ಛಾತಿಯನ್ನು ರಂಗ ಶಿಕ್ಷಣ ಬೆಳೆಸಬಲ್ಲುದು. ನಾಚಿಕೆ, ಅಂಜಿಕೆ ಸ್ವಭಾವದ ವಿಧ್ಯಾರ್ಥಿಳು ರಂಗ ಶಿಕ್ಷಣ ಪಡೆದು ಬಳಿಕ ಅಚ್ಚರಿ ಪಡುವಷ್ಟು ಬದಲಾದ ಅನೇಕ ಉದಾಹರಣೆಗಳಿವೆ.
ರಂಗ ಶಿಕ್ಷಣ ಸಾಮಾನ್ಯವಾಗಿ ಅಭಿನಯ ಕಲೆಯನ್ನು ಮಾತ್ರ ನೀಡುತ್ತದೆ ಎಂದು ಭಾವನೆ ಇದೆ. ಆದರೆ ಒಮ್ಮೆ ರಂಗ ತರಬೇತಿ ಕೇಂದ್ರಕ್ಕೆ ಭೇಟಿ ನೀಡದರೆ ಅಲ್ಲಿಯ ಕಲಿಯೆಯ ದರ್ಶನವಾಗುತ್ತದೆ. ಅಭಿನಯ ಜೊತೆಗೆ ಇನ್ನೊಬ್ಬರಲ್ಲಿ ಹೇಗೆ ವರ್ತಿಸಬೇಕು, ಮಾತನಾಡಬೇಕು. ಹೇಗೆ ಗೌರವಿಸಬೇಕು ಎಂಬುದನ್ನು ರಂಗ ಶಿಕ್ಷಣ ಕಲಿಸುತ್ತದೆ. ಸಣ್ಣ ದನಿಯಲ್ಲಿ ಮಾತನಾಡುವವರು ತೆರೆಯ ಮೇಲೆ ನಿಂತಾಗ ಮೈಕ್ ಇಲ್ಲದೆ ಸಭಾಂಗಣದ ಕೊನೆಯಲ್ಲಿ ಕೂತವರಿಗೂ ಕೇಳುವಷ್ಟು ಧ್ವನಿ ಹೇಗೆ ಬರಿಸುವುದು ಎಂದು ರಂಗ ಶಿಕ್ಷಣ ಕಲಿಸುತ್ತದೆ. ಇದರ ಪರಣಾಮ, ಅಂದು ವೇದಿಕೆ ಹತ್ತಲು ಹೆದರುತ್ತಿದ್ದವರು, ಪ್ರೇಕ್ಷಕರ ಮುಂದೆ ನೆಗೆಪಾಟಲಿಗೀಡಾದವರು ಇಂದು ಅಷ್ಟು ಚೆನ್ನಾಗಿ ಮಾತಾಡ್ತಾರೆ ಅವರೇನಾ ಇವರು ಎಂದು ಕೇಳುವಷ್ಟು ಬದಲಾಗಿದ್ದಾರೆ.
ವಿಧ್ಯಾರ್ಥಿ  ಕಲಾವಿದರು ಯಾವ ವೃತ್ತಿ ಪರ ರಂಗ ಭೂಮಿ ಕಲಾವಿದರಿಗೂಗೂ ಕಡಿಮೆ ಇಲ್ಲದಂತೆ ತಮ್ಮನ್ನು ತಾವು ತೆರೆಯ ಮೇಲೆ ತೆರೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚಿಗೆ ಮಂಗಳೂರು ವಿ.ವಿ ಅಂತರ್ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಗೆಳೆಯರೊಬ್ಬರು ಉದ್ಘರಿಸಿದರು.
ವಿಧ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗಬಾರದು ಕ್ರಿಯಾತ್ಮಕತೆ ಎಂಬ ಶಾಲೆಯ ಕಾಗುಣಿತ ವಿದ್ಯಾಥರ್ಿಗಳು ಅರಿತಿರಬೇಕು. ಕೇವಲ ಪುಸ್ತಕ ಜ್ಞಾನವಿದ್ದರೆ ಸಾಲಲ್ಲ್ಲ. ಕ್ರಿಯಾತ್ಮಕತೆಯ ಗುಣಗಳು ವಿಧ್ಯಾರ್ಥಿಗಳಲ್ಲಿರಬೇಕಾದುದು ಕಾಲದ ಬೇಡಿಕೆ. ಹಾಗಾಗಿ ಕಾಲೇಜು ರಂಗ ತರಬೇತಿ ಕೇಂದ್ರಗಳೂ ವಿಧ್ಯಾರ್ಥಿಗಳ  ಕ್ರಿಯಾತ್ಮಕತೆಯನ್ನು ಪೋಷಿಸುವ ವೇದಿಕೆಯಾಗಿದೆ. ಬಿಡುವಿಲ್ಲದ ಶಿಕ್ಷಣ ಈಗಿನದು. ಆಯಾಸಗೊಂಡು ರಂಗ ತರಬೇತಿ ಕೇಂದ್ರಕ್ಕೆ ಬರುವ ವಿಧ್ಯಾರ್ಥಿಗಳಿಗೆ ಉಲ್ಲಾಸಗೊಳಿಸುವ ಕೆಲಸ ಮೊದಲು ಮಾಡುತ್ತೇವೆ ಎನ್ನುತ್ತಾರೆ ಉಜಿರೆ ಎಸ್.ಡಿ.ಎಂ ಕಾಲೇಜಿನ ರಂಗ ತರಬೇತುದಾರೆ ಗೀತಾ ಸುಲ್ಯ. 
ನಾನು ಕಾಲೇಜಿಗೆ ಬಂದಾಗ ಹಿಂಜರಿಕೆ ಸ್ವಭಾವದವಳಗಿದ್ದೆ. ಪುಸ್ತಕದ ಹುಳುವಾಗಿದ್ದೆ. ಹೊರಗಿನ ಪ್ರಂಪಂಚದ ಜ್ಞಾನ ಅಷ್ಟಕಷ್ಟೇ ಇತ್ತು. ರಂಗ ತರಬೇತು ಕೇಂದ್ರಕ್ಕೆ ಹೋದ ನಂತರ ಎಲ್ಲವೂ ಬದಲಾಯ್ತು. ಹಲವಾರು ನಾಟಕದಲ್ಲಿ ಭಾಗವಹಿಸಿದ್ದೇನೆ. ಖುಷಿಯಾಗಿದ್ದೇನೆ ಎನ್ನುತ್ತಾರೆ ಎಸ್.ಡಿ.ಎಂ ಕಾಲೇಜು ವಿಧ್ಯಾರ್ಥಿನಿ ಸಂಧ್ಯಾ ಶೆಣೈ.
ಶೈಕ್ಷಣಿಕ ಚಟುವಟಿಕೆಗಳಿಂದ ಪ್ರತ್ಯೇಕವಾಗಿಸ ರಂಗ ಶಿಕ್ಷಣ ನೀಡುತ್ತಿರುವದರಿಂದ ಹಲವಾರು ಸಮಸ್ಯೆಗಳು ಆಗುತ್ತಿದೆ. ಸೆಮಿಸ್ಟರ್ ಪದ್ಧತಿ ಈಗಿನ ಕಾಲೇಜು ಶಿಕ್ಷಣವಾಗಿರುವುದರಿಂದ ಯುದ್ಧಕಾಲೇ ಶಸ್ತ್ರಭ್ಯಾಸ ಎನ್ನುವಂತಾಗಿದೆ ರಂಗ ಶಿಕ್ಷಣ. ಪಠ್ಯ ಚಟುವಟಿಕೆಗಳ ಜೊತೆ ರಂಗ ಶಿಕ್ಷಣ ಸೇರಿಸಬೇಕೆಂದು ಒತ್ತಾಯ ಮಾಡಿ ಸಾಕಾಗಿದೆ. ನಮ್ಮ ಕೂಗು ಯಾರಿಗೂ ಕೇಳದಾಗಿದೆ ಎನ್ನುತ್ತಾರೆ ರಂಗ ತರಬೇತುದಾರರೊಬ್ಬುರು.
ಕಾಲೇಜಿನಲ್ಲಿ ರಂಗ ತರಬೇತು ಪಡೆದು ವೃತ್ತಿಪರ ಅಭಿನಯದತ್ತ ಒಲವು ತೋರಿಸಿದ ದೃಷ್ಟಾಂತಗಳೂ ಇವೆ. ಮೈಸೂರು-ಧಾರವಾಡದ ರಂಗಾಯಣ, ಹೆಗ್ಗೋಡಿನ ನೀನಾಸಂನವರು ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ರಂಗಾಸಕ್ತರನ್ನು ಬೆಳೆಸುತ್ತಿದೆ ಪೋಷಿಸುತ್ತಿದೆ. ಹವ್ಯಾಸಿ ರಂಗಭೂಮಿಯಲ್ಲಿ ಅದೆಷ್ಟೋ ಯುವಜನರು ಆಕರ್ಷಿತರಾಗಿದ್ದಾರೆ. ಇವರೆಲ್ಲರ ಆಸಕ್ತಿಗೆ ಮೂಲ ಕಾಲೇಜು ರಂಗಭೂಮಿ. ಈ ಕಾಲೇಜು ರಂಗ ಭೂಮಿ ಶಿಕ್ಷಣವನ್ನು ಪಠ್ಯದ ಜೊತೆ ಸೇರಿಸಿ ಪ್ರತಿಯೊಬ್ಬ ವಿಧ್ಯರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ.
 - ಚಂದ್ರಶೇಖರ್ ಎಸ್ ಅಂತರ 

1 comments:

Post a Comment

Share The Posts

Twitter Delicious Facebook Digg Stumbleupon Favorites More