ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಮಂಜುನಾಥ್ ಭಟ್

ಪ್ರಕೃತಿಯ ಮಡಿಲಲ್ಲಿ ತರಗತಿಗಳ ತೋರಣ;

ವಿದ್ಯಾರ್ಥಿಗಳೂ 100 ಶೇಕಡ ಹಾಜರು ಖಚಿತ

ಮಾಯಾ ಲೋಕದ ಕಿನ್ನರಿ!

ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್ .

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು

ಜಾತ್ರೆಯ ಜಂಗುಳಿಯೊಳಗೆ.....!

ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವ

Thursday 21 March 2013

ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಅವರಿಗೆ ಯಕ್ಷಗಾನ ತಾಳ ಮದ್ದಳೆ ಎಂದರೆ ಅಪಾರ ಪ್ರೀತಿ. ಚಿಕ್ಕ ವಯಸ್ಸಿನಿಂದಲೇ ತನ್ನ ಗಮನ ಅದರತ್ತ ಹರಿಸಿದ್ದರು. ಕರಾವಳಿ ಗಂಡು ಕಲೆ ಯಕ್ಷಗಾನ, ತಾಳಮದ್ದಳೆ ಕಲಿಯಬೇಕೆಂದು ಪಣ ತೊಟ್ಟರು. ಕಲಿಕೆಗಾಗಿ ರಾತ್ರಿ ಹಗಲು ಪರಿಶ್ರಮ ಪಟ್ಟರು. ಸಾವಿರಾರು ಪುಸ್ತಕಗಳ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು. ಇದರ ಪರಿಣಾಮವೆಂಬಂತೆ ಅವರ ಮನೆಯ ಒಂದು ಕೊಠಡಿ ಯಕ್ಷಗಾನದ ಸಣ್ಣ ಗ್ರಂಥಾಲಯವಾಗಿ ಮಾಪರ್ಾಡಾಗಿದೆ.
    ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ವೇಷ ಭೂಷಣ ಹಾಗು ತಾಳಮದ್ದಳೆಯ ಮಾತುಗಾರಿಕೆಗೆ ಮನಸೋತು ಅದನ್ನು ಕರಗತ ಮಾಡುವ ನಿಟ್ಟಿನಲ್ಲಿ ಸಾವಿರ ಪುಸ್ತಕಗಳ ಖರೀದಿಸಿ ಶ್ರಮವಹಿಸಿ ಅಭ್ಯಾಸಿಸಿ ಯಶಸ್ವಿಯಾದ ಯಕ್ಷಪ್ರತಿಭೆ ಮಂಜುನಾಥ್ ಭಟ್ ಅಂತರ. ಅವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪವಿರುವ ಮಾಲಾಡಿಯರು.
ವೃತ್ತಿಯಲ್ಲಿ ಬೆಳ್ತಂಗಡಿಯ ಚಚರ್್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸುತ್ತಿರುವ ಮಂಜುನಾಥ್ ಭಟ್ ಪ್ರವೃತ್ತಿಯನ್ನಾಗಿ ತಾಳಮದ್ದಳೆಯ ಪಾತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಯಕ್ಷಗಾನದ ಒಂದು ಪ್ರಕಾರವಾಗಿರುವ ತಾಳ ಮದ್ದಳೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ತನ್ನ ಹನ್ನೆರಡನೇ ವಯಸ್ಸಿನಲ್ಲೇ ತಾಳಮದ್ದಳೆಯಲ್ಲಿ ಮಾತುಗಾರನಾಗಿ ಕಲಾ ವೃತ್ತಿ ಆರಂಬಿಸಿ ಮಾತಿನ ಮಲ್ಲರಾದರು. ವಿವಿಧ ಅರ್ಥ ನೀಡುವ ಮಾತುಗಾರಿಕೆಗೆ ತಾಳಮದ್ದಳೆ ಹೆಸರುವಾಸಿ. ಅಂತಹ ಮಾತಿನ ಚಟಾಕಿ ಹಾರಿಸಿ ವೀಕ್ಷಕರಿಗೆ ರಂಜಿಸಿ ತಾಳಮದ್ದಳೆಯಲ್ಲಿ ಮಾತೇ ಬಂಡವಾಳ ಎಂದು ನಿರೂಪಿಸಿದರು.
ಯಕ್ಷಗಾನದಲ್ಲೂ ಭಾಗವತರಾಗಿ ಕಾಣಿಸಿಕೊಂಡರು. ಚೆಂಡೆ ತಾಳ ಮದ್ದಳೆ ಬಾರಿಸುವುದನ್ನು ಕಲಿತರು. ಹೀಗೆ ಅನೇಕ ಕಲಾ ಪ್ರಕಾರ ಒಳಗೊಂಡಿರುವ ಯಕ್ಷಗಾನ-ತಾಳಮದ್ದಳೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರವೀಣನೆನಿಸಿಕೊಂಡರು.
ನಾನು ಸ್ವ ಇಚ್ಛೆಯಿಂದ ಸಾವಿರಾರು ರೂಪಾಯಿ ವ್ಯಯಿಸಿ ಯಕ್ಷಗಾನ ಹಗೂ ಅದರ ವಿವಿಧ ಪ್ರಭೇದಗಳ ಕುರಿತಾದ ಸುಮಾರು 1000 ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ. ಯಕ್ಷಗಾನದ ಕುರಿತಾಗಿ ಇನ್ನಷ್ಟು ಕಲಿಯುವ ಹಂಬಲ ನನಗಿದೆ. ನನ್ನ ಸಂಗ್ರಹಣೆಗೆ ಬೆಂಬಲವಾದದ್ದು ನನ್ನ ಮಿತ್ರರಾದ ಸುಬ್ರಹ್ಮಣ್ಯ ಅಧಿಕಾರಿ, ಶಿವ ಅಣ್ಣ ಹಾಗೂ ರಾಮ್ಚಂದ್ರ ಭಟ್. ನನ್ನ ಎಲ್ಲಾ ಸಾಧನೆಗೆ ಸ್ಪೂತರ್ಿ ನೀಡಿದ್ದು ಶ್ರೇಷ್ಠ ಮದ್ದಳೆ ಹಾಗೂ ಚೆಂಡೆ ವಾದಕ ಕಡಬ ನಾರಾಯಣ ಆಚಾರ್ಯ ಎಂದು ತನ್ನ ಸಾಧನೆಗೆ ದಾರಿ ದೀಪವಾದವರನ್ನು ಸ್ಮರಿಸುತ್ತಾರೆ ಮಂಜುನಾಥ್ ಭಟ್.
ತಾಳಮದ್ದಳೆಯ ನಂಟನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಪ್ರವೃತ್ತಿಯಾಗಿ ಪಾತ್ರಧಾರಿಯಾಗಿ ನಟಿಸುತ್ತಿರುವ ಅವರು ಶಿಕ್ಷಕರಾಗಿ ನಿವೃತ್ತಿ ಹೊಂದಿದ ಬಳಿಕ ಪರಿಪೂರ್ಣ ಕಲಾವಿದನಾಗುವ ಬಯಕೆ ಹೊಂದಿದ್ದಾರೆ
ಯಕ್ಷಗಾನ ತಾಳಮದ್ದಳೆ ಮಾತ್ರವಲ್ಲದೆ ಬರವಣಿಗೆಯಲ್ಲೂ ತನ್ನ ಪಕ್ವತೆಯನ್ನು ನಿರೂಪಿಸಿದ್ದಾರೆ. ನಾಟಕ, ಪ್ರಹಸನಗಳನ್ನು ಪ್ರತಿಭಾ ಕಾರಂಜಿಗೆ ವಿದ್ಯಾಥರ್ಿಗಳಿಗಾಗಿ ರಚಿಸಿದ್ದಾರೆ. ಅವರು ರೂಪಿಸಿದ ಕೆಲ ನಾಟಕಗಳು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳಿಸಿದೆ.
    ಜೋತಿಷ್ಯ ಶಾಸ್ತ್ರ, ಅಷ್ಟಮಂಗಳ, ವಾಸ್ತು ನೋಡುವ ವಿದ್ಯೆಯ ಕುರಿತಾಗಿ ಜ್ಞಾನ ಸಂಪಾದಿಸಿರುವ ಮಂಜುನಾಥ್ ಭಟ್, ಮಡಂತ್ಯಾರು ಹಾಗೂ ಸುತ್ತಮತ್ತಲಿನಲ್ಲಿ ಖ್ಯಾತ ಜ್ಯೋತಿಶಿಯಾಗಿ ಹೆಸರು ಪಡೆದಿದ್ದಾರೆ. ಹಲವು ದೇವಸ್ಥಾನಗಳಿಗೆ ವಾಸ್ತು ಹೇಳಿರುವ ಇವರಿಗೆ ಮಾಲಾಡಿಯ ಸಮೀಪದ ನವುಂಡ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಹಲಶೋತ್ಸವದ ಸಂದರ್ಭದಲ್ಲಿ ಧರ್ಮಸ್ಥಳದ ಧಮರ್ಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನಿತರಾಗಿದ್ದರು.
    ಅನೇಕ ವಿಷಯಗಳ ಕುರಿತು ಜ್ಞಾನ ಸಂಪಾದಿಸಿರುವ ಮಂಜುನಾಥ್ ಭಟ್ ಕಲೆ ಸಾಹಿತ್ಯದ ಕುರಿತು ಆಸಕ್ತಿ ಹೊಂದಿದ್ದಾರೆ ಇವರ ಆಸಕ್ತಿ ಇನ್ನಷ್ಟು ಹೆಚ್ಚಲಿ. ಅಳಿವಿನಂಚಿನಲ್ಲಿರುವ ತಾಳಮದ್ದಳೆ ಕಲೆ ಕುರಿತಾಗಿ ಇತರರಿಗೆ ತಿಳಿ ಹೇಳಲಿ. ನಶಿಸಿ ಹೋಗುತ್ತಿರುವ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆಗೆ ಪ್ರೋತ್ಸಾಹದ ಚಿರುಮೆಯಾಗಲಿ.
- ಚಂದ್ರಶೇಖರ ಎಸ್ ಅಂತರ

Share The Posts

Twitter Delicious Facebook Digg Stumbleupon Favorites More